ದಾರ್ಜೀಲಿಂಗ್ ಪರ್ವತ ರೈಲುಮಾರ್ಗ ಭಾರತದ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಯಿಂದ ದಾರ್ಜೀಲಿಂಗ್‌ ಪಟ್ಟಣಕ್ಕೆ ಹಾಸಲಾಗಿರುವ ನ್ಯಾರೋ ಗೇಜ್ ರೈಲುಮಾರ್ಗವಾಗಿದೆ. ಈ ಮಾರ್ಗದ ಹಳಿಗಳ ನಡುವಿನ ಅಂತರ ಕೇವಲ ಎರಡು ಅಡಿಗಳಿದ್ದು ಇದರ ಮೇಲೆ ಸಾಗುವ ರೈಲನ್ನು ಆಟಿಗೆ ರೈಲು ಎಂದು ಸಹ ಕರೆಯಲಾಗುತ್ತದೆ. ದಾರ್ಜೀಲಿಂಗ್ ಪರ್ವತ ರೈಲುಮಾರ್ಗವನ್ನು ೧೮೭೯ ರಿಂದ ೧೮೮೧ರ ಮಧ್ಯೆ ನಿರ್ಮಿಸಲಾಯಿತು. ಸರಾಸರಿ ಸಮುದ್ರಮಟ್ಟದಿಂದ ೧೦೦ ಮೀಟರ್ ಎತ್ತರದಲ್ಲಿರುವ ಸಿಲಿಗುರಿಯಿಂದ ಹೊರಡುವ ಈ ಮಾರ್ಗವು ೨೨೦೦ ಮೀಟರ್ ಎತ್ತರದಲ್ಲಿರುವ ದಾರ್ಜೀಲಿಂಗ್‌ಗೆ ಸಾಗುತ್ತದೆ. ಇಂದು ಸಹ ಈ ಮಾರ್ಗದಲ್ಲಿ ಉಗಿ ಇಂಜಿನ್‌ಗಳನ್ನು ಬಳಸಲಾಗುತ್ತದೆ. ಅಂಚೆ ಸಾಗಿಸುವ ರೈಲಿಗೆ ಮಾತ್ರ ಡೀಸೆಲ್ ಇಂಜಿನ್‌ ಅಳವಡಿಸಲಾಗಿದೆ. ೧೯೯೯ರಲ್ಲಿ ಯುನೆಸ್ಕೋ ದಾರ್ಜೀಲಿಂಗ್ ಪರ್ವತ ರೈಲುಮಾರ್ಗವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು. ಮುಂದೆ ೨೦೦೫ರಲ್ಲಿ ನೀಲಗಿರಿ ಪರ್ವತ ರೈಲುಮಾರ್ಗವನ್ನು ಸಹ ಈ ಮೂಲ ಘೋಷಣೆಗೆ ಹೆಚ್ಚುವರಿಯಾಗಿ ಸೇರಿಸಲಾಯಿತು. == ಇವನ್ನೂ ನೋಡಿ == ಪಶ್ಚಿಮ ಬಂಗಾಳ ವಿಶ್ವ ಪರಂಪರೆಯ ತಾಣ == ಬಾಹ್ಯ ಸಂಪರ್ಕಗಳು == ಅಧಿಕೃತ ಮಾಹಿತಿತಾಣ 2007-02-28 ವೇಬ್ಯಾಕ್ ಮೆಷಿನ್ ನಲ್ಲಿ. ಭಾರತೀಯ ರೈಲ್ವೇಯ ಅಧಿಕೃತ ತಾಣ ದಾರ್ಜೀಲಿಂಗ್ ಮತ್ತು ಆಟಿಗೆ ರೈಲಿನ ಚಿತ್ರಗಳು 2009-01-06 ವೇಬ್ಯಾಕ್ ಮೆಷಿನ್ ನಲ್ಲಿ. ವಿಶ್ವದಲ್ಲಿ ಇನ್ನೂ ಕಾರ್ಯನಿರತವಾಗಿರುವ ಉಗಿ ಇಂಜಿನ್‌ಗಳ ಬಗ್ಗೆ ಮಾಹಿತಿ 2007-06-09 ವೇಬ್ಯಾಕ್ ಮೆಷಿನ್ ನಲ್ಲಿ. ದಾರ್ಜೀಲಿಂಗ್ ಪರ್ವತ ರೈಲಿನ ವೇಳಾಪಟ್ಟಿ